ಮೈಲಾರ ಕಾರ್ಣಿಕೋತ್ಸವ “ತುಂಬಿದ ಕೊಡ ತುಳುಕಿತಲೇ ಪರಾಕ್”

ಪಾಂಡವ ನ್ಯೂಸ್, ಮೈಲಾರ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ಶುಕ್ರವಾರ ನಡೆದಿದೆ. ಹಾಗಾದರೆ ಇಡೀ ರಾಜ್ಯವೇ ಕಾಯುತ್ತಿದ್ದ ಈ ಬಾರಿಯ ಅಂದರೆ ಫೆಬ್ರವರಿ 14, 2025 ಗೊರವಯ್ಯ ಅವರು ಏನು ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಗನಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಈ ವರ್ಷದ ಅಂದರೆ 2025ರ ದೈವವಾಣಿಯನ್ನು ನುಡಿದಿದ್ದಾರೆ. “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಭವಿಷ್ಯವಾಣಿ … Read more

ದೊಡ್ಡನಾಗಪ್ಪಕಾಕಿ ದತ್ತಿ ಕಾರ್ಯಕ್ರಮ ಉದ್ಘಾಟನೆ

ರಾಣೇಬೆನ್ನೂರು 13: ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಡಿ ನಮ್ಮ ಹಿರಿಯರು ಹಾಕಿಕೊಟ್ಟ ಸವಿನೆನಪಿಗಾಗಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ ಎಂದು ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಕಾಕಿ ಹೇಳಿದರು. ಮಂಗಳವಾರ ಇಲ್ಲಿನ ಗೌರಿಶಂಕರ ನಗರದ ಕಾಕಿ ಕುಟುಂಬದವರ ಸಿದ್ಧಿವಿನಾಯಕ, ಆಂಜನೇಯ ಮತ್ತು ನವಗ್ರಹ ದೇವಸ್ಥಾನಗಳ ಆವರಣದಲ್ಲಿ ಹಾವೇರಿ ಜಿಲ್ಲಾ ಹಾಗೂ ರಾಣೇಬೆನ್ನೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ ದಿ|| ದೊಡ್ಡನಾಗಪ್ಪ ತಿರುಕಪ್ಪ … Read more

ಸ್ನೇಹ ಸಮ್ಮೇಳನಗಳು ಮಕ್ಕಳ ವಿಶೇಷ ಪ್ರತಿಭೆಯನ್ನು ಹೊರಗೆಳೆಯಲಿ… ಶಿವಣ್ಣನವರ

ಬ್ಯಾಡಗಿ :ವಾರ್ಷಿಕ ಸ್ನೇಹ ಸಮ್ಮೇಳನಗಳು ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರಗೆಳೆಯುವಂತಾಗಬೇಕು ಆ ಮೂಲಕ ಮಕ್ಕಳು ವಿಶೇಷ ಕೌಶಲಗಳನ್ನು ರೂಢಿಸಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಲು ಉತ್ಸುಕರಾಗಬೇಕೆಂದು ಬ್ಯಾಡಗಿ ಮತಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ಶಿವಣ್ಣನವರ ಹೇಳಿದರು. ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹಾಸರಸ್ವತಿ ಪೂಜಾ ಕಾರ್ಯಕ್ರಮ, ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಪಾಶ್ಚಿಮಾತ್ಯ ದೇಶಗಳ ಅನುಕರಣೀಯ … Read more

ಫೆಬ್ರವರಿ 16 ರಂದು ಹಾವೇರಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ

ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದಿಂದ ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ (ರಿ), ಬೆಂಗಳೂರುನಿಂದ ಹಾವೇರಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಫೆಬ್ರವರಿ 16 ರಂದು, ಬೆಳಿಗ್ಗೆ 10 ಗಂಟೆಗೆ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಭಾಂಗಣದ ಶ್ರೀ ಗಾಯತ್ರಿ ಕ್ಯಾಂಪಸ್, ರಾಣೇಬೆನ್ನೂರು ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾ. ಲಮಾಣಿ ಅವರು ಉದ್ಘಾಟನೆ ನೇರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ … Read more

ಫೈನಾನ್ಸ್‍ನವರ ಕಿರುಕುಳ; ಮಕ್ಕಳಿಗೆ ವಿಷ ಉಣಿಸಿ ತಂದೆ ಆತ್ಮಹತ್ಯೆ ಯತ್ನ

ಪಾಂಡವ ನ್ಯೂಸ್, ಹಾವೇರಿ: ಸಾಲ ನೀಡಿದ ಪೈನಾನ್ಸ್‍ನವರ ಕಿರುಕುಳ ತಾಳಲಾರದೆ ಮನ ನೊಂದ ವ್ಯಕ್ತಿಯೋರ್ವ ತನ್ನಿಬ್ಬರು ಮಕ್ಕಳಿಗೆ ವಿಷ ಪ್ರಾಶನ ಮಾಡಿಸಿ ತಾನೂ ವಿಷ ಸೇವಿಸಿ ಅಸ್ವಸ್ಥಗೊಂಡು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಸೇರಿದ ಘಟನೆ ಜಿಲ್ಲೆಯ ಹಳೆರಿತ್ತಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಘಟನೆ ವಿವರ: ಪೈನಾನ್ಸ್‍ನವರ ಕಿರುಕುಳಕ್ಕೊಳಗಾಗಿ ವಿಷಪ್ರಾಶನ ಮಾಡಿದ ವ್ಯಕ್ತಿಯನ್ನು ನಾಗೇಶ ತಿಪ್ಪಣ್ಣ ಪವಾಡಪ್ಪನರ (40), ಈತನು ತನ್ನ ಮಕ್ಕಳಾದ ಆಕಾಶ (13) ಹಾಗೂ ವೈಷ್ಣವಿ (8) ರವರೊಂದಿಗೆ ಹಳೇರಿತ್ತಿ ಗ್ರಾಮದ ಅಡವಿಯಲ್ಲಿ ವಿಷ ಸೇವನೆ … Read more

ಫೆಬ್ರವರಿ 7 ಕ್ಕೆ ನಮ್ಮ ‘ಅನ್‌ಲಾಕ್‌ ರಾಘವ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ

ಫೆಬ್ರವರಿ 7 ಕ್ಕೆ ನಮ್ಮ ‘ಅನ್‌ಲಾಕ್‌ ರಾಘವ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್‌ ಮತ್ತು ಹಾಡುಗಳು ತುಂಬಾ ಚನ್ನಾಗಿ ಬಂದಿದೆ. ಚಿತ್ರಕ್ಕೆ ರಾಮಾ ರಾಮಾ ರೇ ಖ್ಯಾತಿಯ ಡಿ ಸತ್ಯಪ್ರಕಾಶ್‌ ಕಥೆ, ಚಿತ್ರಕತೆ ಬರೆದಿದ್ದಾರೆ. ರಾಜು ಜೇಮ್ಸ್‌ ಬಾಂಡ್ ಫೇಮ್‌ನ ದೀಪಕ್‌ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ. ಮಯೂರ ಮೋಷನ್ ಪಿಕ್ಚರ್ಸ್‌ ಮತ್ತು ಐಪ್ಲೆಕ್ಸ್‌ ಸಹಯೋಗದಲ್ಲಿ ನಿರ್ಮಾಣ ಆಗಿರೋ ಈ ಸಿನಿಮಾದಲ್ಲಿ ಪ್ರಾಮಿಸಿಂಗ್‌ ಹೀರೋ ಮಿಲಿಂದ್‌ ಗೌತಮ್‌ ಅವ್ರು ಮತ್ತು ಲವ್‌ ಮಾಕ್ಟೇಲ್‌ 2 ಖ್ಯಾತಿಯ ಬೆಡಗಿ … Read more