ರಾಣೇಬೆನ್ನೂರು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ; ಸಾರ್ವಜನಿಕ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ ರಸ್ತೆ ಮೇಲಿನ ಶೆಡ್..!

ಪಾಂಡವ ನ್ಯೂಸ್, ರಾಣೇಬೆನ್ನೂರು: ನಗರದ ಜನ ನಿಬಿಡ ಪ್ರದೇಶವಾದ ಅಂಚೆ ವೃತ್ತದ ಬಳಿ ಇರುವ ಹಳೆ ಕಾರ್ಪೋರೇಶನ್ ಬ್ಯಾಂಕ್ ಎದುರುಗಡೆ ರಸ್ತೆ ತಿರುವಿನ ಅಂಚಿನಲ್ಲಿಯೇ ಬಂದ್ ಮಾಡಿದ ದೊಡ್ಡ ಶೆಡ್ ಒಂದನ್ನು ರಸ್ತೆ ಮೇಲೆಯೇ ಇಟ್ಟಿದ್ದರಿಂದ ಪಾದಾಚಾರಿಗಳು, ವಾಹನ ಸವಾರರ ಪ್ರಯಾಣಕ್ಕೆ ಸಂಚಕಾರ ತಂದೊಡ್ಡಿದಂತಾಗಿದೆ. ಆದರೂ ಸಹ ನಗರಸಭೆ ಪೌರಾಯುಕ್ತ ಎಫ್.ಐ.ಇಂಗಳಗಿ, ಆರೋಗ್ಯಾಧಿಕಾರಿ ಹಾಗೂ ವಾರ್ಡ ಸದಸ್ಯ ಸೇರಿದಂತೆ ಇಲಾಖೆಯ ಇತ್ಯಾದಿಯವರು ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು..! ಅಂಚೆ ವೃತ್ತದಿಂದ ಪೂರ್ವಾಭಿಮುಖವಾಗಿ … Read more

ಪೊಲೀಸ್ ದಾಳಿ; 35.41 ಮದ್ಯ, 6100 ನಗದು ವಶ

ಪಾಂಡವ ನ್ಯೂಸ್, ಹಾವೇರಿ: ಜ.26ರಂದು ಹವೇರಿ ಜಿಲ್ಲಾದ್ಯಂತ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮಿಂಚಿನ ಕಾರ್ಯ ಕೈಗೊಂಡು ಜೂಜಾಟ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 19 ಅಬಕಾರಿ ಹಾಗೂ 2 ಜೂಜಾಟದ ಪ್ರಕರಣಗಳನ್ನು ಪತ್ತೆ ಮಾಡಿ ದಾಳಿ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ಪ್ರಕರಣದಲ್ಲಿ 15 ಜನ ಆರೋಪಿತರಿಂದ ಒಟ್ಟು 35.41 ಲೀಟರ್ ಮದ್ಯವನ್ನು ಹಾಗೂ ಜೂಜಾಟದ ಪ್ರಕರಣಗಳಲ್ಲಿ 8 ಜನ ಆರೋಪಿತರಿಂದ ಒಟ್ಟು ರೂ. 6,100/- ಗಳನ್ನು ಜಪ್ತಿ ಮಾಡಿ ಮುಂದಿನ … Read more

ಶ್ರೀ ರಂಭಾಪುರಿ ಪೀಠದಲ್ಲಿ ಜ.19ರಿಂದ 21 ರವರೆಗೆ ಶತರುದ್ರಯಾಗ ಪೂಜಾ ಕಾರ್ಯಕ್ರಮ

ಪಾಂಡವ ನ್ಯೂಸ್, ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು): ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಜನವರಿ 19ರಿಂದ 21 ರವರೆಗೆ ಶತರುದ್ರಯಾಗ ಪೂಜಾ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿಗಳಾದ ಬೆಳಗಾಲಪೇಟೆ ವೇ.ಸಿದ್ಧಲಿಂಗಯ್ಯ ಶಾಸ್ತ್ರಿಗಳು ಮತ್ತು ಗುರುಕುಲ ಸಾಧಕರ ವೈದಿಕತ್ವದಲ್ಲಿ ದಿನಾಂಕ 19ರಂದು ನವಪದರುದ್ರ ಕಲಶ ಮಂಡಲ ಸ್ಥಾಪನೆ, ಆರಾಧನೆ, ದಶಶಕ್ತಿ ಮಹಾಕಲಶ ಪೂಜಾ, ದಶಪಾಲಕ ರುದ್ರನ ಆರಾಧನ, ರುದ್ರ ಪರಿವಾರ ಸಮೇತ ಪರಬ್ರಹ್ಮರುದ್ರ ಕಲಶ … Read more

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೇ ವರ್ಷದ ಸುವರ್ಣ ಸಂಭ್ರಮ ಸಮಾವೇಶಕ್ಕೆ ಹಾವೇರಿ ಜಿಲ್ಲೆಯಿಂದ 2,500 ಜನ

ಹಾವೇರಿ:- ಜನವರಿ 18 ಹಾಗೂ 19ರಂದು ಬೆಂಗಳೂರಿನಲ್ಲಿ ನಡೆಯುವ ಬ್ರಾಹ್ಮಣ ಮಹಾಸಮ್ಮೇಳನಕ್ಕೆ ಹಾವೇರಿ ಜಿಲ್ಲೆಯಿಂದ ಜಿಲ್ಲೆಯಿಂದ ಅಂದಾಜು 2,500 ಮಂದಿ ಸಮಾಜದವರು ಪಾಲ್ಗೊಳ್ಳಲಿದ್ದಾರೆ’ ಎಂದು ಹಾವೇರಿ ಜಿಲ್ಲಾ ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷರಾದ ಶ್ರೀ ವಸಂತ ಮೊಕ್ತಾಲಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾತನಾಡಿದ ಅವರು, ‘ಮಹಾಸಭಾದ ಜಿಲ್ಲಾ ಘಟಕದಿಂದ ರೈಲು ವ್ಯವಸ್ಥೆ ಮಾಡಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವರು. ಬ್ರಾಹ್ಮಣ ಸಮಾಜ ಸಂಘಟಿತವಾಗಿದ್ದು, ಯಾರೇ ಅಪಮಾನ … Read more

ವರ್ಷಕ್ಕೆ ಒಮ್ಮೆ ಬರುವ ನಮ್ಮೂರ ಜಾತ್ರೆ ಚೌಡೇಶ್ವರಿ ಜಾತ್ರೆ

ಪಾಂಡವ ನ್ಯೂಸ್, ಹಾವೇರಿ: ಉತ್ತರ ಕರ್ನಾಟಕದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ ಇಡೀ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಜಿಲ್ಲೆಯ ರಾಣೇಬೆನ್ನೂರಿನ ಗಂಗಾಜಲ ಶ್ರೀ ಚೌಡೇಶ್ವರಿ ಜಾತ್ರಯೂ ಸಹ ಅಷ್ಟೇ ಪಸ್ರಸಿದ್ಧಿ ಪಡೆದುಕೊಂಡಿದೆ. ಇದು ಅಕ್ಷರಶಃ ಮಹಿಳೆಯರ ಜಾತ್ರೆ ಎಂದರೂ ಕೂಡ ತಪ್ಪಾಗಲಾರದು. ಈ ಜಾತ್ರೆಯಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಾರೆ. ಅದರಲ್ಲಿ ಮಹಿಳೆಯರದೇ ಬಹುಪಾಲು. ಹೌದು..! ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರ ತಪ್ಪಿದರೆ, ಎರಡನೆ ವಾರದಲ್ಲಿ ಪ್ರಾರಂಭವಾಗುವ ಶ್ರೀ ಗಂಗಾಜಲ … Read more

ರತ್ನಮ್ಮ ಬಾಳಗೌಡ್ರ ನಿಧನ

ಪಾಂಡವ ನ್ಯೂಸ್, ರಾಣೆಬೆನ್ನೂರು: ತಾಲೂಕಿನ ಹೂಲಿಹಳ್ಳಿ ಗ್ರಾಮದ ರತ್ನಮ್ಮ ಮಲ್ಲನಗೌಡ ಬಾಳಗೌಡ್ರ (65) ಇವರು ದಿನಾಂಕ 15-1-2025ರಂದು ನಿಧನ ಹೊಂದಿದರು. ಮೃತರು ಪತಿ, ಓರ್ವ ಪುತ್ರ ಹಾಗೂ 4 ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹೂಲಿಹಳ್ಳಿ ಗ್ರಾಮದಲ್ಲಿ ಜರುಗಿತು.

ಅವಿರೋಧವಾಗಿ ಅದ್ಯಕ್ಷ – ಉಪಾಧ್ಯಕ್ಷ ಅಯ್ಕೆ

ರಾಣೆಬೆನ್ನೂರ: ಸ್ಥಳೀಯ ಎ.ಪಿ.ಎಂ.ಸಿ. ಯಾರ್ಡಿನಲ್ಲಿರುವ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಕೋ – ಆಪರೇಟಿವ್ ಬ್ಯಾಂಕ್ ಲಿ. ಇದರ ನೂತನ  ಆಡಳಿತ ಮಂಡಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ನಗರದ ಗಣ್ಯ ವರ್ತಕ, ಲಯನ್ಸ್ ಎಂ.ಜಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ದಾನಿ ಮಲ್ಲೇಶಪ್ಪ ಶಿವಪ್ಪ  ಅರಕೇರಿಯವರು  ಸತತ ಬಾರಿಗೆ 6ನೇ ಅಧ್ಯಕ್ಷರಾಗಿ ಹಾಗೂ ರವಿ  ವೀರಪ್ಪ ಕರ್ಜಗಿ ಉಪಾದ್ಯಕ್ಷರಾಗಿ ಅವಿರೋಧವಾಗಿ  ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿ  ಹಾಗೂ ಜಿಲ್ಲಾ ಸಹಾಯಕ ನಿಬಂಧಕ ವಿಕ್ರಂ ಕುಲಕರ್ಣಿ ಘೋಷಿಸಿದರು.    ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಬ್ಯಾಂಕಿನ … Read more

ಚೌಡೇಶ್ವರಿ ಜಾತ್ರೆ ಸಡಗರದಲ್ಲಿ ರಾಣೇಬೆನ್ನರಿನ ಜನತೆ

ರಾಣೇಬೆನ್ನೂರು: ಪ್ರತಿ ವರ್ಷದಂತೆ ಈ ವರ್ಷವು ರಾಣೇಬೆನ್ನರೂರಿನ ಚೌಡೇಶ್ವರಿ ಜಾತ್ರೆ ಸಂಡಗರದಿಂದ ನೆಡಿತಾ ಇದೆ ,ಈಸಲಾ ಒಂದು ವಿಷೇಶ ಅಂದರೆ ಈ ಸಲ ಜಾತ್ರೆಯಲ್ಲಿ ಜೂಜಾಟ ಇಲ್ಲಾ . ಎಲ್ಲಾ ಹೆಣ್ಣುಮಕ್ಕಳು ಬಳೆ ಕ್ಲಿಪ್ ಮತ್ತು ಇನ್ನಿತರ ವಸ್ತುಗಳ ಖರೀದಿ ಯಲ್ಲಿ ಇದಾರೆ.ದೊಡ್ಡ ದೊಡ್ಡ ಹೂವಿನ ಮಾಲೆ ಡೋಲು ಸೌಂಡ್ ಬಾಕ್ಸ ಹಾಕಿಕೊಂಡು ಬರುತ್ತಿರು ಜನರು ಬಹಳಷ್ಟು ಇದಾರೆ. ಕಳೆದ ವರ್ಷಕ್ಕೆ ಲೆಕ್ಕ ಹಾಕಿದರೆ ಈಸಲಾ ಅಷ್ಟು ಜನ ಜಾತ್ರೆಯಲ್ಲಿ ಕಾಣಸತಾ ಇಲ್ಲಾ. ಇನ್ನೂ ಮೂರು ದಿವಸದ … Read more

ಖ್ಯಾತ ಸಾಹಿತಿ ಡಾ.ನಾ ಡಿಸೋಜ ಅವರಿಗೆ ಭಾವಪೂರ್ಣ ಶೃದ್ದಾಂಜಲಿ

ರಾಣೇಬೆನ್ನೂರು: ಅನಾರೋಗ್ಯದಿಂದಾಗಿ ಇತ್ತೀಚೆಗೆ ದೈವಾಧೀನರಾದ ನಾಡಿನ ಖ್ಯಾತ ಸಾಹಿತಿ ಡಾ. ನಾ ಡಿಸೋಜ ಅವರಿಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು. ಡಾ. ನಾ ಡಿಸೋಜಾ ಅವರು ಮಕ್ಕಳಿಗಾಗಿ 40 ಕ್ಕೂ ಹೆಚ್ಚು ಕಾದಂಬರಿಗಳು, ಅನೇಕ ಸಣ್ಣ ಕಥೆಗಳು, ನಾಟಕಗಳು ಸೇರಿದಂತೆ 94 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು ತಮ್ಮ ಮಕ್ಕಳ ಕಾದಂಬರಿ ಮುಳುಗಡೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವನ್ನು ಪಡೆದಿದ್ದಾರಲ್ಲದೆ ಅವರ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ … Read more

ಸಹಕಾರ ಸಂಘದ ಅಧ್ಯಕ್ಷರಾಗಿ ಹೊಳಾಚೆ ಜಡೆಪ್ಪ ಅಧಿಕಾರ ಸ್ವೀಕಾರ.

ಹೊಸಪೇಟೆ;  ತಾಲೂಕಿನ ಬೈಲುವದ್ದಿಗೇರಿ ಪ್ರಾಧಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಕುಬಾಳು ಹೊಳಾಚೆ ಜಡೆಪ್ಪ ಬುಧವಾರ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಸಹಕಾರ ಸಂಘವು 28 ಕೋಟಿ ವಹಿವಾಟು ಹೊಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ವೃದ್ದಿಗೊಳಿಸುವ ಕೆಲಸ ಮಾಡಲಾಗುವುದು. ನಮ್ಮ ಸಂಘದ ಎಲ್ಲಾ ಸದಸ್ಯರಿಗೆ ಹಾಗು ರೈತರಿಗೆ ಸಾಲ ಸೌಲಭ್ಯ, ಬೀಜ, ರಸಗೊಬ್ಬರ,ಕೃಷಿ ಸಲಕರಣೆಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದರು. ಈ … Read more