ಪಾಂಡವ ನ್ಯೂಸ್, ಮೈಲಾರ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ಶುಕ್ರವಾರ ನಡೆದಿದೆ. ಹಾಗಾದರೆ ಇಡೀ ರಾಜ್ಯವೇ ಕಾಯುತ್ತಿದ್ದ ಈ ಬಾರಿಯ ಅಂದರೆ ಫೆಬ್ರವರಿ 14, 2025 ಗೊರವಯ್ಯ ಅವರು ಏನು ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಗನಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಈ ವರ್ಷದ ಅಂದರೆ 2025ರ ದೈವವಾಣಿಯನ್ನು ನುಡಿದಿದ್ದಾರೆ. “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಇನ್ನು ಈ ವೇಳೆ ಮೈಲಾರಲಿಂಗೇಶ್ವರನ ಕಾರ್ಣೀಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾದರು. ಕಳೆದ ಬಾರಿ ಅಂದರೆ 2024ರಲ್ಲಿ “ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್” ಎಂದು ಭವಿಷ್ಯವಾಣಿ ನುಡಿದಿದ್ದು, ಇದರಂತೆಯೇ ಉತ್ತಮ ಮಳೆಯಾಗಿದ್ದು, ಬೆಳೆಯು ಕೂಡ ಚೆನ್ನಾಗಿ ಬಂದಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಈ ಮೂಲಕ ಕಳೆದ ಬಾರಿಯ ಭವಿಷ್ಯ ನಿಜ ಆಗಿದೆ. 2023ರಲ್ಲಿ ಕಾರ್ಣಿಕ “ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್” ಎಂಬ ಕಾರ್ಣಿಕ ಭವಿಷ್ಯವನ್ನು ನುಡಿದಿದ್ದರು. ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡಿದ್ದು, ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ನುಡಿದಿದ್ದಾರೆ. ಮೈಲಾರ ಲಿಂಗೇಶ್ವರನ ಭವಿಷ್ಯ ವಾಣಿಯನ್ನು ಕೇಳಲು ಇಡೀ ರಾಜ್ಯದ ಜನರು ಕಾತರದಿಂದ ಕಾಯುತ್ತಿದ್ದರು. ಇದೀಗ 2025ರ ಭವಿಷ್ಯ ಹೊರಬಿದ್ದಿದೆ. ಕಾರ್ಣಿಕ ನುಡಿಯುವ ಗೊರವಪ್ಪ ಡೆಂಕನ ಮರಡಿಯಲ್ಲಿ ರಥಸಪ್ತಮಿಯಿಂದ 11 ದಿನಗಳ ಕಾಲ ಭಂಡಾರ ನೀರು, ಹಾಲು ಹಣ್ಣು ಸೇವಿಸಿ ಉಪವಾಸ ವ್ರತಾಚರಣೆಯಲ್ಲಿರುತ್ತಾರೆ. ಬಳಿಕ ಸಂಪ್ರದಾಯದಂತೆ ಬಿಲ್ಲನ್ನೇರಿ ಇಂದು ಭವಿಷ್ಯವಾಣಿ ಕಾರ್ಣಿಕವನ್ನು ನುಡಿದಿದ್ದಾರೆ.
ಮೈಲಾರ ಕಾರ್ಣಿಕೋತ್ಸವ “ತುಂಬಿದ ಕೊಡ ತುಳುಕಿತಲೇ ಪರಾಕ್”
On: February 14, 2025 7:37 PM
--Ad--

