--Advertisement--

ಸ್ನೇಹ ಸಮ್ಮೇಳನಗಳು ಮಕ್ಕಳ ವಿಶೇಷ ಪ್ರತಿಭೆಯನ್ನು ಹೊರಗೆಳೆಯಲಿ… ಶಿವಣ್ಣನವರ

On: February 13, 2025 6:27 PM
Follow us on:
--Ad--

Whatsapp Channel

Join Now

Telegram Group

Join Now

ಬ್ಯಾಡಗಿ :ವಾರ್ಷಿಕ ಸ್ನೇಹ ಸಮ್ಮೇಳನಗಳು ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರಗೆಳೆಯುವಂತಾಗಬೇಕು ಆ ಮೂಲಕ ಮಕ್ಕಳು ವಿಶೇಷ ಕೌಶಲಗಳನ್ನು ರೂಢಿಸಿಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಲು ಉತ್ಸುಕರಾಗಬೇಕೆಂದು ಬ್ಯಾಡಗಿ ಮತಕ್ಷೇತ್ರದ ಶಾಸಕರು ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಹಾಸರಸ್ವತಿ ಪೂಜಾ ಕಾರ್ಯಕ್ರಮ, ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳ ಅನುಕರಣೀಯ ಮಾಡುವುದೇ ದೇಶದ ಪರಂಪರೆ ಎಂಬಂತೆ ಇತ್ತೀಚಿನ ಯುವ ಜನಾಂಗದ ವರ್ತನೆಯಾಗಿದೆ. ಇದರ ಬದಲು ನಮ್ಮ ದೇಶದ ಜನಪದ ಸೊಗಡಿನ ಜಾನಪದ ನೃತ್ಯಗಳು, ತತ್ವಪದಗಳು, ಸದಭಿರುಚಿಯ ಸಿನಿಮಾಗಳ ಹಾಡುಗಳ ನೃತ್ಯಗಳನ್ನು ಮಕ್ಕಳಿಂದ ಮಾಡಿಸಿವುದು ಇಂದಿನ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವ ಶಾಲೆಗಳು ಇತ್ತ ಚಿತ್ತ ಹರಿಸಬೇಕಾಗಿದೆ ಎಂದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೊರ್ವೆಲ್ ಮತ್ತು ಕೊಠಡಿಗಳನ್ನು ಕಟ್ಟಿಸಿ ಕೊಡಲಾಗುವುದೆಂದು ಹೇಳಿದರು.
ಡಾ ಬಸವರಾಜ ವೀರಾಪುರ ಮಾತನಾಡಿ ಸರ್ಕಾರಿ ಶಾಲೆಗಳು ಪ್ರತಿಭಾವಂತ ಶಿಕ್ಷಕರನ್ನು ಹೊಂದಿದ್ದು ಗುಣಾತ್ಮಕ ಶಿಕ್ಷಣ ಕೊಡಲು ಇನ್ನಷ್ಟು ಪ್ರಯತ್ನ ಮಾಡಬೇಕಾಗಿದೆ. ಶಿಕ್ಷಕರಿಗಿಂತ ಪಾಲಕರು ಸರ್ಕಾರಿ ಶಾಲೆಗಳ ಶಿಕ್ಷಕರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರ್ಯ ಮಾಡುವ ಶಿಕ್ಷಕರ ಬೆನ್ನು ತಟ್ಟುವ ಕಾರ್ಯ ಮಾಡಬೇಕೆಂದರು. ತಮ್ಮ ತಂದೆಯವರ ಹೆಸರಿನಲ್ಲಿ ಶಾಲೆಯಲ್ಲಿ ಒಂದು ಬೋಜನಾಲಯ ಕೊಠಡಿ ಕಟ್ಟಿಸಿ ಕೊಡುವುದಾಗಿ ವಾಗ್ದಾನ ಮಾಡಿದರು.
ಯುವ ಮುಖಂಡರಾದ ನಾಗರಾಜ ಆನ್ವೇರಿ ಮಾತನಾಡುತ್ತ ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ನಡೆಸಲ್ಪಡುತ್ತಿರುವ ವಾರ್ಷಿಕೋತ್ಸವಗಳು ತುಂಬಾ ಅರ್ಥಪೂರ್ಣವಾಗಿ ಮೂಡಿ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಜಾನಪದ ನೃತ್ಯಗಳು, ಸದಭಿರುಚಿಯ ಸಿನಿಮಾ ಹಾಡುಗಳಿಗೆ ನೃತ್ಯಗಳು ಸೇರಿದಂತೆ ಡಾ ರಾಜಪ್ಪ ದಳವಾಯಿ ವಿರಚಿತ *ಕುಲಂ ಕುಲಮಲ್ತು*ಡಾ ಎಚ್ ಎಸ್ ವೆಂಕಟೇಶ ಮೂರ್ತಿ ವಿರಚಿತ ‘ಬಿಲ್ಲ ಹಬ್ಬ’ ನಾಟಕಗಳು ಪ್ರೇಕ್ಷಕರ ಕರತಾಡನದ ನಡುವೆ ಮನಸೂರೆಗೊಂಡವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಪ್ರಶಾಂತ ಹೊಸಮನಿ ವಹಿಸಿದ್ದರು.
ಕಾರ್ಯಕ್ರಮದಲ್ಲಿಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶಿವಯೋಗಿ ಹುಣಸಿಕಟ್ಟಿ ಮುಖಂಡರಾದ ,ಸತೀಶಗೌಡ ಪಾಟೀಲ, ರವಿ ಪ್ರಭಾಕರ ಹೊಸಮನಿ, ವೆಂಕಟೇಶ ಈಡಿಗರ, ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರುತಿ ಲಮಾಣಿ, ಎಸ್ಡಿಎಂಸಿ ಸದಸ್ಯರಾದ ಕರಬಸಪ್ಪ ಆನ್ವೇರಿ, ಕಲವೀರಪ್ಪ ಹುಣಸಿಕಟ್ಟಿ, ಪ್ರಕಾಶ ಲಮಾಣಿ,ಟೋಪಣ್ಣ ಲಮಾಣಿ,ಮಲ್ಲಿಕಾರ್ಜುನಗೌಡ ಪಾಟೀಲ, ವಿನೋದ ಮಾಳಗಿ,ಶಿಲ್ಪಾ ಆನವಟ್ಟಿ, ರಾಜೇಶ್ವರಿ ದಾವಣಗೆರೆ, ನೇತ್ರಾವತಿ ಯತ್ನಳ್ಳಿ, ಮಂಗಳಾ ಶಿಗ್ಗಾವಿ, ತಾರಾ ಲಮಾಣಿ, ಶಾಂತವ್ವ ಲಮಾಣಿ, ಫಕ್ಕೀರಪ್ಪ ಹೊಂಬರಡಿ, ಯಲ್ಲಪ್ಪ ರ್ಯಾವಣ್ಣನವರ, ಮರಿಯಪ್ಪ ಮಾಳಗಿ, ಶ್ರೀ ಮತಿ ವೀರಮ್ಮ ಮನ್ನಂಗಿ, ಬಸವರಾಜ ಹೊಸಮನಿ, ಕರಬಸಪ್ಪ ಯತ್ನಳ್ಳಿ, ಮುತ್ತಣ್ಣ ಶಿಗ್ಗಾವಿ, ರಾಮಚಂದ್ರ ಅಂಗಡಿ ಸೇರಿದಂತೆ
ಶಾಲೆಯ ಪ್ರಧಾನ ಅಧ್ಯಾಪಕರಾದ ಎನ್ ಬಿ ಅಬಲೂರು, ಜಿ ಬಿ ಮಾಗಳ, ಎ ಟಿ ಪೀಠದ, ಚಂದ್ರಶೇಖರ ಹೊನ್ನಪ್ಪನವರ , ಡಿ ಜಿ ಕಮದೋಡ, ಚೈತ್ರ ಕೆ ಎಮ್, ಚೈತ್ರಾರಾವ್ ಟಿ ಎಸ್, ಸುನಿತಾ ಟಿ, ಹೊನ್ನಪ್ಪ ತಳವಾರ , ಕೆ ಎಸ್ ಪಾಟೀಲ, ವೆಂಕಟೇಶ ಈಡಿಗರ, ಶ್ವೇತಾ ಪಲ್ಲೇದ, ಆರತಿ ದಳವಾಯಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಮಲ್ಲಪ್ಪ ಫ ಕರೇಣ್ಣನವರ ಮಾಡಿದರು.

WhatsApp Channel

Join Now

Telegram Join

Join Now

Follow on Instagram

Join Now