ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದಿಂದ
ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘ (ರಿ), ಬೆಂಗಳೂರುನಿಂದ ಹಾವೇರಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಫೆಬ್ರವರಿ 16 ರಂದು, ಬೆಳಿಗ್ಗೆ 10 ಗಂಟೆಗೆ ಬಿ.ಎ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಭಾಂಗಣದ ಶ್ರೀ ಗಾಯತ್ರಿ ಕ್ಯಾಂಪಸ್, ರಾಣೇಬೆನ್ನೂರು ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾ. ಲಮಾಣಿ ಅವರು ಉದ್ಘಾಟನೆ ನೇರವೆರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಭಾಪತಿಗಳು ಕರ್ನಾಟಕ ವಿಧಾನ ಪರಿಷತ್ತು ಬಸವರಾಜ ಹೊರಟ್ಟಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ , ಹಿರೇಕೆರೂರ – ರಟ್ಟಿಹಳ್ಳಿ ಶಾಸಕ ಯು.ಬಿ. ಬಣಕಾರ, ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ಶಿಗ್ಗಾಂವ – ಸವಣೂರ ಶಾಸಕ ಯಾಸೀರ ಅಹಮದಖಾನ್ ಪಠಾಣ, ಗದಗ ಶಾಸಕ ಪ್ರೋ ಎಸ್. ವಿ. ಸಂಕನೂರ, ಕರ್ನಾಟಕ ರಾಜ್ಯ ಅನುದಾನಿತ ಪ.ಪೂ.ಕಾಲೇಜುಗಳ ನೌಕರರ ಸಂಘ ಅಧ್ಯಕ ಡಾ. ಹರೀಶ್ ಎನ್, ರಾಣೇಬೆನ್ನೂರು ನಗರಸಭೆಯ ಅಧ್ಯಕ್ಷೆ ಚಂಪಕ್ಕೆ ರಮೇಶ ಬಸ್ಸಳ್ಳಿ, ಪ್ರಭಾರ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಆನಂದ ಮುದಕಮ್ಮ ಹಾಗೂ ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಸಲಹಾ ಸಮಿತಿ ಸದಸ್ಯರು, ಹಾವೇರಿ ಜಿಲ್ಲೆಯ ವಿವಿಧ ತಾಲೂಕು ಘಟಕ ಸದಸ್ಯರು ಭಾಗವಹಿಸಿಲಿದ್ದಾರೆ.


