ಫೆಬ್ರವರಿ 7 ಕ್ಕೆ ನಮ್ಮ ‘ಅನ್‌ಲಾಕ್ ರಾಘವ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ತುಂಬಾ ಚನ್ನಾಗಿ ಬಂದಿದೆ.
ಚಿತ್ರಕ್ಕೆ ರಾಮಾ ರಾಮಾ ರೇ ಖ್ಯಾತಿಯ ಡಿ ಸತ್ಯಪ್ರಕಾಶ್ ಕಥೆ, ಚಿತ್ರಕತೆ ಬರೆದಿದ್ದಾರೆ. ರಾಜು ಜೇಮ್ಸ್ ಬಾಂಡ್ ಫೇಮ್‌ನ ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ.
ಮಯೂರ ಮೋಷನ್ ಪಿಕ್ಚರ್ಸ್ ಮತ್ತು ಐಪ್ಲೆಕ್ಸ್ ಸಹಯೋಗದಲ್ಲಿ ನಿರ್ಮಾಣ ಆಗಿರೋ ಈ ಸಿನಿಮಾದಲ್ಲಿ ಪ್ರಾಮಿಸಿಂಗ್ ಹೀರೋ ಮಿಲಿಂದ್ ಗೌತಮ್ ಅವ್ರು ಮತ್ತು ಲವ್ ಮಾಕ್ಟೇಲ್ 2 ಖ್ಯಾತಿಯ ಬೆಡಗಿ ರೇಚಲ್ ಡೇವಿಡ್ ಜೊತೆಯಾಗಿ ಅಭಿನಯಿಸಿದಾಾರೆ. ಚಿತ್ರದ ನಾಯಕನಿಗೆ ಯಾವುದೇ ರೀತಿಯ ಬೀಗಗಳನ್ನ ಕೈ ಗೆ ಸಿಗುವ ವಸ್ತುಗಳನ್ನು ಬಳಸಿ ಸಲೀಸಾಗಿ ಅನ್‌ಲಾಕ್ ಮಾಡುವ ಟ್ಯಾಲೆಂಟ್ ಇರುತ್ತದೆ. ಆದರೆ, ಲೈಫ್ ಎಂಬ ಜರ್ನಿಲಿ ಅವನು ಲಾಕ್ ಆದಾಗ, ಅದನ್ನ ಹೇಗೆ ಅನ್‌ಲಾಕ್ ಮಾಡಿಕೊಂಡು ಆಚೆ ಬರ್ತಾನೆ ಅನ್ನೋದೇ ಚಿತ್ರದ ಒನ್ ಲೈನ್ ಸ್ಟೋರಿ.
ಬಹಳ ವರ್ಷಗಳ ನಂತರ ಹಾಸ್ಯ ನಟ ಸಾಧು ಕೋಕಿಲ ಅವರು ಈ ಚಿತ್ರದಲ್ಲಿ ಒಂದು ವಿಭಿನ್ನ ಪಾತ್ರದ ಮೂಲಕ ಕಾಮಿಡಿಯ ಕಚಗುಳಿ ಇಡಲಿದ್ದಾರೆ.
ಈ ಚಿತ್ರದಲ್ಲಿ ಮೂರು ಬ್ಯೂಟಿಫುಲ್ ಹಾಡುಗಳಿವೆ. ಹೃದಯಶಿವ ಅವರು, ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಹಾಗೂ ವಾಸುಕಿ ವೆೈಭವ್ ಅವರು ಹಾಡುಗಳನ್ನು ಬರೆದಿದ್ದಾರೆ. ವರಾಹ ರೂಪಂ ಹಾಡಿರೋ ಸಾಯಿ ವಿಘ್ನೇಶ್, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ವಿಜಯ್ ಪ್ರಕಾಶ್ ಹಾಗೂ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು ಅವರ ಹಿನ್ನೆಲೆ ಗಾಯನ ಇದೆ. ಜೆ.ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದೆ. ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರುಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಕೋಟೆನಗರಿ ಚಿತ್ರದುರ್ಗದ ಬೆಟ್ಟ, ಗುಡ್ಡ, ರಸ್ತೆ, ಗಲ್ಲಿಗಳು ಹಾಗೂ ಬೆಂಗಳೂರಿನ ಸುಂದರ ತಾಣಗಳು, ಕಲರ್‌ಫುಲ್ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಪ್ರಮುಖ ಪಾತ್ರಗಳಲ್ಲಿ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರ್ ಸಾಯಿ ಕುಡ್ಲ, ಭೂಮಿ ಶೆಟ್ಟಿ ಮೊದಲಾದವ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿ ಇದೆ. ಮೈ ನವಿರೇಳಿಸೋ ಹಾಸ್ಯ ದೃಷ್ಯಗಳು, ಇಂಪಾದ ಹಾಡುಗಳು, ವಿಶೇಷ ಪಾತ್ರದೊಂದಿಗೆ ಸಾಧು ಕೋಕಿಲ ಅವರ ಹೊಟ್ಟೆ ಹುಣ್ಣಾಗಿಸುವ ಕಾಮಿಡಿ, ಅದ್ಭುತ ಛಾಯಾಗ್ರಹಣ, ಕಲಾವಿದರ ಮನಮೋಹಕ ಅಭಿನಯ ಹಾಗೂ ಅತ್ಯದ್ಭುತ ನಿರ್ದೇಶನದಿಂದ ಕೂಡಿದ ಒಂದು ಕಂಪ್ಲೀಟ್ ಮನರಂಜನಾ ಪ್ಯಾಕೇಜ್ ಅನ್‌ಲಾಕ್ ರಾಘವ.
ಮತ್ತೊಂದು ಖುಷಿ ವಿಚಾರ ಅಂದ್ರೆ, ಈ ಚಿತ್ರದ ಟ್ರೇಲರ್ ಮತ್ತು ಸಾಂಗ್‌ಗಳನ್ನು ನೋಡಿ ಕೇರಳ ಮತ್ತು ತೆಲುಗಿನಲ್ಲೂ ಸಿನಿಮಾ ರಿಲೀಸ್ ಮಾಡಿ ಎಂದು ಬೇಡಿಕೆ ಬಂದಿದೆ. ಈಗಾಗಲೇ ಅನ್‌ಲಾಕ್ ರಾಘವ ಟ್ರೇಲರ್ ಮತ್ತು ಹಾಡುಗಳು 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿಕೊಂಡಿದೆ ಮತ್ತು 500ಕ್ಕೂ ಹೆಚ್ಚು ರೀಲ್ಸ್‌ಗಳಾಗಿರೋದು ಹೆಮ್ಮೆಯ ಸಂಗತಿ. ‘ರಾಘವ ರಾಘವ’ ಹಾಡು ಇನ್ಸ್ಟಾಗ್ರಾಮಲ್ಲಿ ಟ್ರೆಂಡಿಂಗ್ ಆಗಿದೆ. ಮತ್ತೊಂದು ವಿಶೇಷ ಅಂದ್ರೆ, ʻಅನ್‌ಲಾಕ್ ರಾಘವʼ ಚಿತ್ರಕ್ಕೆ ಆರಂಭದಿಂದಲೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾದ ಟೈಟಲ್ ಲಾಂಚ್ ಅವರೇ ಮಾಡಿದ್ದರು. ಟ್ರೇಲರ್ ಲಾಂಚ್‌ಗೂ ಅವರೇ ಬಂದು, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ರಾಘವ ಚಿತ್ರದಲಿ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ತಿರೋ ನಾಯಕ ಮಿಲಿಂದ್,
ಈ ಚಿತ್ರಕ್ಕಾಗಿ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತಾವು ಹುರಿಗೊಳಿಸಿಕೊಳ್ಳೋಕೆ ಆಕ್ಟಿಂಗ್, ಡಾನ್ಸ್, ಸ್ಟಂಟ್ ಎಲ್ಲದರ ಬಗ್ಗೆಯೂ ಪರಿಣಿತರಿಂದ ಒಂದು ವರ್ಷ ಕಾಲ ತರಬೇತಿ ಪಡೆದಿದ್ದಾರೆ. ಲವ್ ಮಾಕ್ಟೇಲ್ 2 ಖ್ಯಾತಿಯ ಬೆಡಗಿ ರೇಚಲ್ ಡೇವಿಡ್ ಜೊತೆಯಾಗಿ ಅಭಿನಯಿಸಿದ್ದಾರೆ. ಇವರಿಬ್ಬರ ಕೆಮೆಸ್ಟ್ರಿ ತೆರೆ ಮೇಲೆ ಮೋಡಿ ಮಾಡಲಿದೆ.
ʻಅನ್‌ಲಾಕ್ ರಾಘವʼ ಚಿತ್ರ ಆರಂಭದಿಂದ ಕೊನೆವರೆಗೂ ಪ್ರೇಕ್ಷಕರಿಗೆ ಪೈಸಾ ವಸೂಲ್ ಅನುಭವ ನೀಡೋದಂತೂ ಗ್ಯಾರಂಟಿ
ಫೆಬ್ರವರಿ 7 ಕ್ಕೆ ನಮ್ಮ ‘ಅನ್‌ಲಾಕ್ ರಾಘವ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆ
On: February 2, 2025 1:45 PM
--Ad--


