ಪಾಂಡವ ನ್ಯೂಸ್, ಹಾವೇರಿ: ಜ.26ರಂದು ಹವೇರಿ ಜಿಲ್ಲಾದ್ಯಂತ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಮಿಂಚಿನ ಕಾರ್ಯ ಕೈಗೊಂಡು ಜೂಜಾಟ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 19 ಅಬಕಾರಿ ಹಾಗೂ 2 ಜೂಜಾಟದ ಪ್ರಕರಣಗಳನ್ನು ಪತ್ತೆ ಮಾಡಿ ದಾಳಿ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದು, ಅಬಕಾರಿ ಪ್ರಕರಣದಲ್ಲಿ 15 ಜನ ಆರೋಪಿತರಿಂದ ಒಟ್ಟು 35.41 ಲೀಟರ್ ಮದ್ಯವನ್ನು ಹಾಗೂ ಜೂಜಾಟದ ಪ್ರಕರಣಗಳಲ್ಲಿ 8 ಜನ ಆರೋಪಿತರಿಂದ ಒಟ್ಟು ರೂ. 6,100/- ಗಳನ್ನು ಜಪ್ತಿ ಮಾಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‍ಪಿ ಅಂಶಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ದಾಳಿ; 35.41 ಮದ್ಯ, 6100 ನಗದು ವಶ
On: January 27, 2025 2:55 PM
--Ad--


