ಪಾಂಡವ ನ್ಯೂಸ್, ಹಾವೇರಿ: ಉತ್ತರ ಕರ್ನಾಟಕದಲ್ಲಿ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ ಇಡೀ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಜಿಲ್ಲೆಯ ರಾಣೇಬೆನ್ನೂರಿನ ಗಂಗಾಜಲ ಶ್ರೀ ಚೌಡೇಶ್ವರಿ ಜಾತ್ರಯೂ ಸಹ ಅಷ್ಟೇ ಪಸ್ರಸಿದ್ಧಿ ಪಡೆದುಕೊಂಡಿದೆ. ಇದು ಅಕ್ಷರಶಃ ಮಹಿಳೆಯರ ಜಾತ್ರೆ ಎಂದರೂ ಕೂಡ ತಪ್ಪಾಗಲಾರದು. ಈ ಜಾತ್ರೆಯಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಭಕ್ತರು ಸೇರುತ್ತಾರೆ. ಅದರಲ್ಲಿ ಮಹಿಳೆಯರದೇ ಬಹುಪಾಲು.
ಹೌದು..! ಪ್ರತಿ ವರ್ಷ ಜನವರಿ ತಿಂಗಳ ಮೊದಲ ವಾರ ತಪ್ಪಿದರೆ, ಎರಡನೆ ವಾರದಲ್ಲಿ ಪ್ರಾರಂಭವಾಗುವ ಶ್ರೀ ಗಂಗಾಜಲ ಚೌಡೇಶ್ವರಿ ಜಾತ್ರೆ ಅತೀ ವಿಜೃಂಭಣೆಯಿಂದ ಜರುಗುತ್ತದೆ. ಈ ಜಾತ್ರೆಯಲ್ಲಿ ಮಹಿಳೆಯರದೇ ಮೇಲುಗೈ. ಜಾತ್ರಾ ಮುಂಜಾಗ್ರತವಾಗಿ ಮಹಿಳೆಯರು ದೇವಿಗೆ ತಮ್ಮ ಹರಕೆಯನ್ನು ಹೊತ್ತುಕೊಂಡಿರುತ್ತಾರೆ. ತಾವು ಅಂದುಕೊಂಡ ಕೆಲಸ ಕಾರ್ಯಗಳನ್ನು ದೇವಿ ಈಡೇರಿಸಿಯೇ ಈಡೇರಿಸುತ್ತಾಳೆ ಎಂಬ ಮಹಿಳೆಯರ ನಂಬಿಕೆ ಯಾವ ಕಾರಣಕ್ಕೂ ಸುಳ್ಳಾಗುವುದಿಲ್ಲ ಎನ್ನುವ ಮಾತು ಜಗಜ್ಜನಿತ.
ಪ್ರತಿ ವರ್ಷ ಜನವರಿ ತಿಂಗಳ ಸೋಮವಾರದಿಂದ ಶನಿವಾರದವರೆಗೆ ಅಂದರೆ 6 ದಿನಗಳ ಕಾಲ ಜರುಗುವ ಚೌಡೇಶ್ವರಿ ಜಾತ್ರೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸು, ವಿವಿಧ ಬಗೆಯ ಮಕ್ಕಳ ಆಟಿಕ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ತಂಪು ಪಾನೀಯಗಳು ಭಕ್ತರ ಮನಸ್ಸನ್ನು ರಂಜಿಸಿದರೆ, ತೂಗುಯ್ಯಾಲೆ, ಜೋಕಾಲಿ ಸೇರಿದಂತೆ ಇತರೆ ಆಟಗಳು ಮಕ್ಕಳ ಮನಸ್ಸನ್ನು ರಂಜಿಸುತ್ತಿವೆ.
ಸೋಮವಾರ ದೇವಿ ಮೆರವಣಿಗೆ ಪ್ರಾರಂಭವಾಗುತ್ತದೆ. ಆಗ ಭಕ್ತರು ದೀಡ ನಮಸ್ಕಾರ ಹಾಕುವುದರ ಮೂಲಕ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಅದರಲ್ಲಿ ಮಕ್ಕಳು, ಮಹಿಳೆಯರು, ಪುರುಷರು, ವೃದ್ದರಾದಿಯಾಗಿ ಪಾಲ್ಗೊಳ್ಳುತ್ತಾರೆÉ. ವಿಶೇಷತೆಯೆಂದರೆ, ಮಹಿಳೆಯರೇ ಹೆಚ್ಚು ಪಾಲು ದೀಡ ನಮಸ್ಕಾರ ಹಾಕುತ್ತಾರೆ. ಒಟ್ಟಾರೆ ಹೇಳಬೇಕೆಂದರೆ, ಗಂಗಾಜಲ ಶ್ರೀ ಚೌಡೇಶ್ವರಿ ದೇವಿಯು ಪ್ರತಿಯೊಬ್ಬ ಭಕ್ತರ ಕೋರಿಕೆಯನ್ನು ಈಡೇರಿಸುತ್ತಾಳೆ ಎಂಬುದು ಮಾತ್ರ ಸತ್ಯ ಎನ್ನುವ ಮಾತುಗಳು ಭಕ್ತಾದಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಗಂಗಾಜಲ ಶ್ರೀ ಚೌಡೇಶ್ವರಿ ಜಾತ್ರೆ ಪ್ರಾರಂಭವಾಗಿ ಇಂದಿಗೆ 5 ದಿನಗಳು ಗತಿಸಿವೆ. ರಾಣೇಬೆನ್ನೂರಿನಲ್ಲಿ ನಡೆಯುವ ಈ ಜಾತ್ರೆಗೆ ವಿದೇಶದಲ್ಲಿ ವಾಸವಾಗಿದ್ದವರೂ ಸಹ ಆಗಮಿಸಿ ದೇವಿಯ ದರ್ಶನ ಪಡೆಯುತಾರೆ. ಮಹಾ ನಗರಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವಕ-ಯುವತಿಯರು ವಾರಗಟ್ಟಲೆ ರಜೆ ತೆಗದುಕೊಂಡು ಬಂದು ಈ ಹಬ್ಬ ಆಚರಿಸುವುದು ಇನ್ನೂ ವಿಶೇಷವಾಗಿದೆ. ಒಟ್ಟಾರೆ, ನಮ್ಮೂರ ಈ ಚೌಡೇಶ್ವರಿ ಜಾತ್ರೆ ನಮ್ಮ ಸಂಭ್ರಮ. ನಮ್ಮ ಜಿಲ್ಲೆಯ ಹೆಮ್ಮೆಯ ಜಾತ್ರೆ
ವರ್ಷಕ್ಕೆ ಒಮ್ಮೆ ಬರುವ ನಮ್ಮೂರ ಜಾತ್ರೆ ಚೌಡೇಶ್ವರಿ ಜಾತ್ರೆ
On: January 16, 2025 3:54 PM
--Ad--


