--Advertisement--

ಖ್ಯಾತ ಸಾಹಿತಿ ಡಾ.ನಾ ಡಿಸೋಜ ಅವರಿಗೆ ಭಾವಪೂರ್ಣ ಶೃದ್ದಾಂಜಲಿ

On: January 15, 2025 7:02 PM
Follow us on:
--Ad--

Whatsapp Channel

Join Now

Telegram Group

Join Now

ರಾಣೇಬೆನ್ನೂರು: ಅನಾರೋಗ್ಯದಿಂದಾಗಿ ಇತ್ತೀಚೆಗೆ ದೈವಾಧೀನರಾದ ನಾಡಿನ ಖ್ಯಾತ ಸಾಹಿತಿ ಡಾ. ನಾ ಡಿಸೋಜ ಅವರಿಗೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು. ಡಾ. ನಾ ಡಿಸೋಜಾ ಅವರು ಮಕ್ಕಳಿಗಾಗಿ 40 ಕ್ಕೂ ಹೆಚ್ಚು ಕಾದಂಬರಿಗಳು, ಅನೇಕ ಸಣ್ಣ ಕಥೆಗಳು, ನಾಟಕಗಳು ಸೇರಿದಂತೆ 94 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು ತಮ್ಮ ಮಕ್ಕಳ ಕಾದಂಬರಿ ಮುಳುಗಡೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರವನ್ನು ಪಡೆದಿದ್ದಾರಲ್ಲದೆ ಅವರ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ ಎರಡೂ ಚಲನಚಿತ್ರಗಳಾಗಿ ರೂಪುಗೊಂಡು ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದನ್ನು ಸ್ಮರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಭಾಕರ ಎನ್ ಶಿಗ್ಲಿ, ಗೌರವ ಕಾರ್ಯದರ್ಶಿಗಳಾದ ಜಗದೀಶ ಮಳಿಮಠ, ಬಸನಗೌಡ ಉಮ್ಮನಗೌಡ್ರ, ಚಂದ್ರಶೇಖರ ಮಡಿವಾಳರ, ಪರಶುರಾಮ ಸವಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Channel

Join Now

Telegram Join

Join Now

Follow on Instagram

Join Now