ಹೊಸಪೇಟೆ; ತಾಲೂಕಿನ ಬೈಲುವದ್ದಿಗೇರಿ ಪ್ರಾಧಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಕುಬಾಳು ಹೊಳಾಚೆ ಜಡೆಪ್ಪ ಬುಧವಾರ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಸಹಕಾರ ಸಂಘವು 28 ಕೋಟಿ ವಹಿವಾಟು ಹೊಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು ಇನ್ನಷ್ಟು ವೃದ್ದಿಗೊಳಿಸುವ ಕೆಲಸ ಮಾಡಲಾಗುವುದು. ನಮ್ಮ ಸಂಘದ ಎಲ್ಲಾ ಸದಸ್ಯರಿಗೆ ಹಾಗು ರೈತರಿಗೆ ಸಾಲ ಸೌಲಭ್ಯ, ಬೀಜ, ರಸಗೊಬ್ಬರ,ಕೃಷಿ ಸಲಕರಣೆಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ
ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ರೇವಯ್ಯಸ್ವಾಮಿ, ಮುಖಂಡರಾದ ವೈ.ಎರಿಸ್ವಾಮಿ, ವಿ.ರಾಮಕೃಷ್ಣ, ಕೋರಿ ಪಕ್ಕೀರಪ್ಪ, ಎಚ್.ಮೂಕಪ್ಪ, ಮೆಟ್ರಿ ಜಡೆಪ್ಪ, ಉಡೇದ ರಮೇಶ, ಮೆಟ್ರಿ ಗಂಗಾಧರ, ವೈ.ಹುಚ್ಚಪ್ಪ, ನಾಗರೆಡ್ಡಿ, ದಿನೇಶ, ವಿ.ರವಿಕುಮಾರ್, ಜಿಂದಾಲ್ ಮಲ್ಲಿಕಾರ್ಜುನ, ಕೆ.ಎಸ್.ಪಂಪಾಪತಿ, ಪಂಪಾಪತಿ ಸೇರಿದಂತೆ ಇತರರು ಇದ್ದರು.
ಸಹಕಾರ ಸಂಘದ ಅಧ್ಯಕ್ಷರಾಗಿ ಹೊಳಾಚೆ ಜಡೆಪ್ಪ ಅಧಿಕಾರ ಸ್ವೀಕಾರ.
On: January 15, 2025 6:52 PM
--Ad--


